Notifications

London is the capital city of England.

Events

Paris is the capital of France.

Tenders

Paris is the capital of France.

Tourism

Tokyo is the capital of Japan.

Weather

Tokyo is the capital of Japan.

Anim pariatur cliche reprehenderit, enim eiusmod high life accusamus terry richardson ad squid. 3 wolf moon officia aute, non cupidatat skateboard dolor brunch.

ಅಧ್ಯಕ್ಷರು
ಶ್ರೀ ಟಿ.ಎಂ. ವಿಜಯ ಭಾಸ್ಕರ್‌, ಐಎಎಸ್‌(ನಿವೃತ್ತ) ಮತ್ತು ಕರ್ನಾಟಕ ಸರ್ಕಾರದ ಮಾಜಿ ಮುಖ್ಯ ಕಾರ್ಯದರ್ಶಿ

ch.karc2@karnataka.gov.in

ಕರ್ನಾಟಕದಲ್ಲಿ ಆಡಳಿತ ಹಿಂದೆಂದಿಗಿಂತಲೂ ವಿಕಾಸಗೊಳ್ಳುತ್ತಿದೆ. ಕರ್ನಾಟಕ ಸರ್ಕಾರದಿಂದ ಶ್ರೀ ಎಚ್. ರಾಮಸ್ವಾಮಿ ಆಡಳಿತ ಸುಧಾರಣಾ ಆಯೋಗ ಸ್ಥಾಪನೆಯಾದಾಗಿನಿಂದ, ಎರಡು ದಶಕಗಳಲ್ಲಿ ಸಮಾಜ, ಆರ್ಥಿಕತೆ, ತಂತ್ರಜ್ಞಾನ ಮತ್ತು ಸರ್ಕಾರದ ವಿವಿಧ ಸಂಸ್ಥೆಗಳಲ್ಲಿ ಹಾಗೂ ಎಲ್ಲಾ ಕ್ಷೇತ್ರಗಳಲ್ಲಿ ಹೆಚ್ಚಿನ ಪರಿವರ್ತನೆ ಕಂಡುಬಂದಿದೆ.

ಭಾರತದಲ್ಲಿ ಅತ್ಯಂತ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ರಾಜ್ಯಗಳಲ್ಲಿ ಕರ್ನಾಟಕವು ಒಂದಾಗಿದೆ. ಕರ್ನಾಟಕದ ರಾಜ್ಯರಾಜದಾನಿ ಬೆಂಗಳೂರು ದೇಶದ ವಿಜ್ಞಾನ ಮತ್ತು ತಂತ್ರಜ್ಞಾನ ಕೇಂದ್ರವಾಗಿ ಬೆಳವಣಿಗೆ ಹೊಂದಿರುವುದರಿಂದ ವ್ಯಾಪಕವಾಗಿ ಗುರುತಿಸಲ್ಪಟ್ಟಿದೆ. ಬೆಂಗಳೂರು ನಗರವು ಹೆಚ್ಚಿನ ವಿದ್ಯಾವಂತ, ತಾಂತ್ರಿಕ ಬುದ್ಧಿವಂತ ನಾಗರಿಕರನ್ನು ಹೊಂದಿದ್ದು ನೈಜ ಅಥವಾ ವಾಸ್ತವ ಅಂತರರಾಷ್ಟ್ರೀಯ ಮಾನ್ಯತೆಯನ್ನು ಹೊಂದಿದ್ದಾರೆ. ಅವರು ಸಹಜವಾಗಿಯೇ ಹೆಚ್ಚಿನ ನಿರೀಕ್ಷೆಗಳನ್ನು ಹೊಂದಿದ್ದಾರೆ ಮತ್ತು ಸರ್ಕಾರವು ಗುಣಮಟ್ಟದ ಮತ್ತು ಸಮಯಕ್ಕೆ ತಕ್ಕಂತೆ ಸೇವೆಗಳನ್ನು ನೀಡುವಾಗ ಇನ್ನು ಹೆಚ್ಚು ಬೇಡಿಕೆಯಿದೆ. ಇದೇ ಸಮಯದಲ್ಲಿ ಜನಸಂಖ್ಯೆಯ ಹೆಚ್ಚಿನ ಭಾಗವು ಡಿಜಿಟಲ್ ಸಂಪರ್ಕ ಹೊಂದಿಲ್ಲ ಮತ್ತು ಕೆಲವರು ಮೂಲ ಸಾಕ್ಷರತೆಯಿಂದ ವಂಚಿತರಾಗಿದ್ದಾರೆ. ಸರ್ಕಾರವು ಎಲ್ಲಾ ಜನರ ಮತ್ತು ವಿಶೇಷವಾಗಿ ದುರ್ಬಲ ವರ್ಗದವರ ನಿರೀಕ್ಷೆಗಳನ್ನು ಹೆಚ್ಚಿಸಬೇಕು. ಈ ಎರಡು ವಿಪರೀತಗಳ ನಡುವೆ ಎಲ್ಲಾ ಹಂತಗಳಲ್ಲಿ ಜನರಿಗೆ ಗುಣಮಟ್ಟದ ಮತ್ತು ಸಮಯೋಚಿತ ಸೇವೆಗಳನ್ನು ತಲುಪಿಸಬೇಕಾಗಿದೆ.

ಕಳೆದ ಐದು ವರ್ಷಗಳಲ್ಲಿ, ವಿಶೇಷವಾಗಿ ಕೋವಿಡ್‌ನಿಂದ ಆವೃತ್ತವಾಗಿದ್ದ ಕಳೆದು ಒಂದು ವರ್ಷದಲ್ಲಿ ಮಾನವ ಸಂವಹನ ವಿಧಾನ ಮತ್ತು ಸಂಸ್ಥೆಗಳು ಕಾರ್ಯನಿರ್ವಹಿಸುವ ವಿಧಾನದಲ್ಲಿ ಭಾರಿ ಬದಲಾವಣೆಗಳಾಗಿವೆ. ಮಾಹಿತಿ ಮತ್ತು ಸಂವಹನ ತಂತ್ರಜ್ಞಾನದ ಬಳಕೆಯು ಜನರಲ್ಲಿ ಕೆಲಸದ ಸ್ಥಳ ಮತ್ತು ಸಂವಹನದಲ್ಲಿ ಕ್ರಾಂತಿ ಉಂಟು ಮಾಡಿದೆ. ಕಳೆದ ಎರಡು ದಶಕಗಳಲ್ಲಿ ರಾಜ್ಯ ಮತ್ತು ಅದರಾಚೆ ಅನೇಕ ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆಗಳು ನಡೆದಿವೆ. ಅಭಿವೃದ್ಧಿ ಮತ್ತು ನಿಯಂತ್ರಕ ಕ್ಷೇತ್ರಗಳಲ್ಲಿ ಸರ್ಕಾರದ ಹೆಚ್ಚುತ್ತಿರುವ ಪಾತ್ರದ ಜೊತೆಗೆ ರಾಜ್ಯ ಮತ್ತು ಕೇಂದ್ರ ಸರ್ಕಾರವು ನಿರ್ವಹಿಸುವ ಕಲ್ಯಾಣ ಕಾರ್ಯಕ್ರಮಗಳು ಮತ್ತು ಯೋಜನೆಗಳ ವಿನಿಯೋಗ ಮತ್ತು ವ್ಯಾಪ್ತಿ ಮಹತ್ತರವಾಗಿ ಹೆಚ್ಚಾಗಿದೆ.

ಈಗಿರುವ ಆಡಳಿತ ವ್ಯವಸ್ಥೆಯನ್ನು ಸಮಗ್ರವಾಗಿ ಮೌಲ್ಯಮಾಪನ ಮಾಡುವ ಅವಶ್ಯಕತೆಯಿದೆ ಮತ್ತು 21 ನೇ ಶತಮಾನದ ಮುಂಬರುವ ದಶಕಗಳಲ್ಲಿ ಉತ್ತಮ ಆಡಳಿತ ಮತ್ತು ಆಡಳಿತ ವ್ಯವಸ್ಥೆಯನ್ನು ರಚಿಸಲು ಆಡಳಿತದಲ್ಲಿ ಬದಲಾವಣೆಗಳನ್ನು ಶಿಫಾರಸು ಮಾಡುವ ಅವಶ್ಯಕತೆಯಿದೆ ಎಂದು ಕರ್ನಾಟಕ ಸರ್ಕಾರ ಅಭಿಪ್ರಾಯಪಟ್ಟಿದೆ.

ಈ ಮೇಲಿನ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಕರ್ನಾಟಕ ಸರ್ಕಾರವು ಕರ್ನಾಟಕ ಆಡಳಿತ ಸುಧಾರಣಾ ಆಯೋಗ -2 ಅನ್ನು ರಚಿಸಿತು.

india.gov.in

ಭಾರತ ಸರ್ಕಾರದ ಜಾಲತಾಣ

karnataka.gov.in

ಕರ್ನಾಟಕ ಸರ್ಕಾರದ ಜಾಲತಾಣ

dpar.karnataka.gov.in

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ